ಪಂಜಾಬಿ ವಿಕಿಪೀಡಿಯ ( ಪಂಜಾಬಿ:ਪੰਜਾਬੀ ਵਿਕੀਪੀਡੀਆ ) ಉಚಿತ ವಿಶ್ವಕೋಶವಾದ ವಿಕಿಪೀಡಿಯಾದ ಪಂಜಾಬಿ ಭಾಷೆಯ ಆವೃತ್ತಿಯಾಗಿದೆ. ಎರಡು ಪಂಜಾಬಿ ವಿಕಿಪೀಡಿಯಾ ಆವೃತ್ತಿಗಳಿವೆ. ಪೂರ್ವ ಪಂಜಾಬಿ ವಿಕಿಪೀಡಿಯಾ ( ಗುರುಮುಖಿ ಲಿಪಿಯಲ್ಲಿ) ಮತ್ತು ಪಶ್ಚಿಮ ಪಂಜಾಬಿ ವಿಕಿಪೀಡಿಯ ( ಶಹಮುಖಿ ಲಿಪಿಯಲ್ಲಿ). == ಪೂರ್ವ ಪಂಜಾಬಿ ಆವೃತ್ತಿ == ಪೂರ್ವ ಪಂಜಾಬಿ ಆವೃತ್ತಿಯ ಡೊಮೇನ್ ಜೂನ್ 3, 2002 ರಂದು ಅಸ್ತಿತ್ವಕ್ಕೆ ಬಂದಿತು ಆದರೆ ಮೊದಲ ಮೂರು ಲೇಖನಗಳನ್ನು ಆಗಸ್ಟ್ 2004 ರಲ್ಲಿ ಮಾತ್ರ ಬರೆಯಲಾಗಿದೆ ಜುಲೈ 2012 ರಲ್ಲಿ, ಇದು 2,400 ಲೇಖನಗಳನ್ನು ತಲುಪಿದೆ. ಆಗಸ್ಟ್ 2012 ರಿಂದ, ಇದು ಪ್ರಪಂಚದಾದ್ಯಂತ ಸುಮಾರು 2.6 ಕೋಟಿ ಓದುಗರನ್ನು ಹೊಂದಿದೆ. ಮೊದಲ ಪಂಜಾಬಿ ವಿಕಿಪೀಡಿಯ ಕಾರ್ಯಾಗಾರವನ್ನು ಜುಲೈ 28, 2012 ರಂದು ಲುಧಿಯಾನದಲ್ಲಿ ಆಯೋಜಿಸಲಾಯಿತು. ನಂತರ ಆಗಸ್ಟ್ 16, 2012 ರಂದು ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ವಿಕಿ ಸಂಪಾದಿಸುವುದು ಮತ್ತು ಸೇರಿಸುವುದು ಹೇಗೆ ಎಂದು ಜನರಿಗೆ ತಿಳಿಸಲು ಅಭಿಯಾನವೊಂದನ್ನು ಕೈಗೊಳ್ಳಲಾಗಿತ್ತು. ಈ ವಿಕಿಪೀಡಿಯವನ್ನು ಸುಧಾರಿಸಲು ಮತ್ತು ಸಂಪಾದಕರ ಸಂಖ್ಯೆಯನ್ನು ಹೆಚ್ಚಿಸಲು ವಿಕಿ-ಘಟನೆಗಳು ಮತ್ತು ಕಾರ್ಯಾಗಾರಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಅಕ್ಟೋಬರ್ 2015 ರಲ್ಲಿ ಅಮೃತಸರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೆಮಿನಾರ್ ಆಯೋಜಿಸಲಾಗಿದ್ದು, 17 ಶಾಲೆಗಳ 148 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ವಿಕಿಪೀಡಿಯ ಬಗ್ಗೆ ಜಾಗೃತಿ ಮೂಡಿಸುವ ವಿಚಾರ ಸಂಕಿರಣದ ಗುರಿ. ಗುರುಮುಖಿ ಪಂಜಾಬಿ ವಿಕಿಪೀಡಿಯಾದಲ್ಲಿ ಪ್ರಸ್ತುತ 34,505 ಲೇಖನಗಳಿವೆ. == ಪಶ್ಚಿಮ ಪಂಜಾಬಿ ಆವೃತ್ತಿ == ಪಶ್ಚಿಮ ಪಂಜಾಬಿ ಆವೃತ್ತಿಯನ್ನು 24 ಅಕ್ಟೋಬರ್ 2008 ರಂದು ವಿಕಿಮೀಡಿಯ ಇನ್ಕ್ಯುಬೇಟರ್ ಮೂಲಕ ಪ್ರಾರಂಭಿಸಲಾಯಿತು, ಮತ್ತು ಅದರ ಡೊಮೇನ್ ಆಗಸ್ಟ್ 13, 2009 ರಂದು ಅಸ್ತಿತ್ವಕ್ಕೆ ಬಂದಿತು. ಈ ಯೋಜನೆಗೆ ಇಸ್ಲಾಮಾಬಾದ್‌ನ ಕಾಲೇಜು ಪ್ರಾಧ್ಯಾಪಕ ಖಾಲಿದ್ ಮಹಮೂದ್ ಪ್ರವರ್ತಕನಾಗಿದ್ದ. ಇದನ್ನು ಅನ್ವರ್ ಮಸೂದ್ ಪ್ರಾರಂಭಿಸಿದರು ಪಶ್ಚಿಮ ಪಂಜಾಬಿ ವಿಕಿಪೀಡಿಯಾದಲ್ಲಿ ಪ್ರಸ್ತುತ 53,508 ಲೇಖನಗಳಿವೆ. == ಇವನ್ನೂ ನೋಡಿ == ಹಿಂದಿ ವಿಕಿಪೀಡಿಯ ಉರ್ದು ವಿಕಿಪೀಡಿಯ == ಉಲ್ಲೇಖಗಳು ==